ಪದ್ಮಪ್ರಭ
	ಸು. 1300. ಜೈನ ಟೀಕಾಕಾರ. ಪಂಚಾಸ್ತಿಕಾಯ ಟೀಕೆ ಮತ್ತು ವಿಂಶತಿಪ್ರರೂಪಣೀಟೀಕೆ ಎಂಬ ಎರಡು ಟೀಕಾ ಗ್ರಂಥಗಳನ್ನು ರಚಿಸಿದ್ದಾನೆ. ಈತನ ಕಾಲ ಖಚಿತವಾಗಿ ತಿಳಿಯದು. ತನ್ನ ಕಾಲದ ಬಗೆಗೆ ಅಥವಾ ಕೃತಿ ರಚನೆಯ ಕಾಲದ ಬಗೆಗೆ ಕವಿ ಏನನ್ನೂ ಹೇಳಿಲ್ಲ. ಮಾಘಣಂದಿ (ಸು. 1350) ಕೃತ ಶ್ರಾವಕಾಚಾರದಿಂದಲೂ ಈತ ಅನುವಾದ ಮಾಡಿವುರುದರಿಂದ ಆ ಕಾಲಕ್ಕೆ ಈಚೆ ಸು. 1300 ರಲ್ಲಿ ಇದ್ದಿರಬಹುದೆಂದು ಊಹಿಸಬಹುದು.

	ಈತ ನಿಷ್ಠಾವಂತ ಜೈನ ವಿದ್ವಾಂಸ. ಜೈನ ಪರಂಪರೆಯಲ್ಲಿ ಜೈನಾಗಮಗಳಲ್ಲಿ ಶ್ರದ್ಧೆಯುಳ್ಳವ, ಗೌರವುಳ್ಳವ ; ಜೊತೆಗೆ ಈತನಿಗೆ ಸಂಸ್ಕøತ, ಪ್ರಾಕೃತ ಮತು ಕನ್ನಡ ಭಾಷೆಗಳಲ್ಲಿ ಉತ್ತಮ ಪ್ರವೇಶವಿತ್ತು. ಸಂಸ್ಕøತ ಪ್ರಾಕೃತಗಳಲ್ಲಿನ ಶಾಸ್ತ್ರಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸುವುದರಿಂದ ತನ್ನ ವಿದ್ವತ್ತನ್ನು ಈತ ಮೆರೆದಿದ್ದಾನೆ.

ಈತನ ಇನ್ನೊಂದು ಕೃತಿ ಪಂಚಾಸ್ತಿಕಾಯ ಟೀಕೆ. ಇದು ಜೈನಾಚಾರ್ಯರಲ್ಲಿ ಪ್ರಾಚೀನರೂ ಪ್ರಸಿದ್ಧರೂ ಆದ ಕುಂದಕುಂದಾಚಾರ್ಯರಿಂದ ರಚಿತವಾದ ಪ್ರಾಕೃತ ಕೃತಿಯ ಟೀಕೆ ; ಬಹು ಜನಪ್ರಿಯವಾದುದು.			(ಕೆ.ಎ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ